ಜೈಪುರ: ಗಣರಾಜ್ಯೋತ್ಸವದ ಮುನ್ನ ರಾಜಸ್ಥಾನದಲ್ಲಿ ಭದ್ರತಾ ಪಡೆಗಳು ಬೃಹತ್ ಪ್ರಮಾಣದಲ್ಲಿ ಬೇಟೆಯಾಡಿದೆ.
ನಾಗೌರ್ ಜಿಲ್ಲೆಯ ಹರ್ಸೌರ್ (ಸರ್ಹಾದ್ ಹರ್ಸೌರ್) ಗ್ರಾಮದ ಒಂದು ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 10,000 ಕೆಜಿ ಅಮೋನಿಯಮ್ ನೈಟ್ರೇಟ್ ಅನ್ನು ರಾಜಸ್ಥಾನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಇಲಾಖೆ ಕೊಟ್ಟ ಮಾಹಿತಿ ಆಧರಿಸಿ ತಡರಾತ್ರಿ ನಡೆಸಿದ ದಾಳಿಯಲ್ಲಿ ಈ ಭಾರೀ ಪ್ರಮಾಣದ ಸ್ಫೋಟಕ ರಾಸಾಯನಿಕಗಳು ಪತ್ತೆಯಾಗಿದ್ದು, ಜೊತೆಗೆ ಡಿಟೊನೇಟರ್‌ಗಳು, ಫ್ಯೂಸ್ ತಂತಿಗಳು ಹಾಗೂ ಬ್ಲಾಸ್ಟಿಂಗ್‌ಗೆ ಬಳಸುವ ಇತರ ಸಾಮಗ್ರಿಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಸುಲೇಮಾನ ಖಾನ್ (58) ಎಂಬ ವ್ಯಕ್ತಿಯನ್ನು ತಕ್ಷಣ ಪೊಲೀಸರು ಬಂಧಿಸಿದ್ದು, ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಎಕ್ಸ್‌ಪ್ಲೋಸಿವ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಶಪಡಿಸಿಕೊಂಡ ಅಮೋನಿಯಮ್ ನೈಟ್ರೇಟ್ ಸುಮಾರು 187 ಚೀಲಗಳಲ್ಲಿ ಸಂಗ್ರಹಿಸಲಾಗಿದ್ದು, ಇದನ್ನು ಗಣಿಗಾರಿಕೆ ಅಥವಾ ಇತರ ಅಕ್ರಮ ಚಟುವಟಿಕೆಗಳಿಗೆ ಬಳಸುವ ಉದ್ದೇಶವಿತ್ತು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಪ್ರಮಾಣದ ಮುಟ್ಟುಗೋಲು ರಾಜ್ಯದ ಇತಿಹಾಸದಲ್ಲೇ ದಾಖಲೆಯ pramanaddu ಎನ್ನಲಾಗಿದೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಇದೇ ಸಂದರ್ಭದಲ್ಲಿ ನಡೆದ ದಾಳಿ ಇದಾಗಿರುವುದರಿಂದ ಮಹತ್ವ ಪಡೆದುಕೊಂಡಿದ್ದು, ಸ್ಫೋಟಕಗಳ ಮೂಲ ಮತ್ತು ಇವುಗಳನ್ನು ಪೂರೈಸಿದ ಜಾಲದ ಕುರಿತು ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
0 Comments