ಟೂರಿಸಂನಲ್ಲಿ ವಿಶ್ವದಾಖಲೆ ಬರೆದ ವಾರಣಾಸಿ !

2025ರಲ್ಲಿ ಹಿಂದೆಂದೂ ಕಾಣದಷ್ಟು ಭಕ್ತರು ವಾರಣಾಸಿಗೆ ಭೇಟಿ ಕೊಟ್ಟಿದ್ದಾರೆ ವಾರಣಾಸಿಯ ಮಟ್ಟಿಗೆ ಇದೊಂದು ಐತಿಹಾಸಿಕ ದಾಖಲೆಯಾಗಿದ್ದು 2025ರ ಒಂದೇ ವರ್ಷದಲ್ಲಿ 146.97 ಮಿಲಿಯನ್ ಪ್ರವಾಸಿಗರು ವಾರಣಾಸಿಯ ಪ್ರವಾಸ ಮಾಡಿದ್ದಾರೆ. ಈ ಮೂಲಕ 'ಸ್ಪಿರಿಚುವಲ್ ಟೂರಿಸಂ'ನಲ್ಲಿ ವಾರಣಾಸಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ.

ಇತ್ತೀಚಿನ ವರ್ಷಗಳಲ್ಲಿ ವಾರಣಾಸಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಕೂಡ ಈ ದಾಖಲೆಯಲ್ಲಿ ಪಾಲು ಪಡೆದಿವೆ. ಮುಖ್ಯವಾಗಿ ಕಾಶಿ ವಿಶ್ವನಾಥ ಕಾರಿಡಾರ್, ಸುಧಾರಿತ ಸಂಪರ್ಕ ಸೌಲಭ್ಯ, ನಗರದೊಳಗಿನ ನವೀಕೃತ ಸೌಲಭ್ಯಗಳು ಮುಖ್ಯವಾಗಿ ಕಾಶಿಯಲ್ಲಿ ಯಾತ್ರಿಕರನ್ನು ಸೆಳೆದವು.
2014ನೇ ಇಸವಿಗೆ ಹೋಲಿಸಿದರೆ ಕಾಶಿಗೆ ಬರುವ ಯಾತ್ರಿಕರ ಸಂಖ್ಯೆ ಸುಮಾರು 25 ಪಟ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಆಗ್ರಾ, ಗೋವಾ ಮುಂತಾದ ಬಹಳ ಪ್ರಸಿದ್ಧ ಪ್ರವಾಸಿ ಕೇಂದ್ರಗಳನ್ನು ಈ ಬಾರಿ ವಾರಣಾಸಿ ಹಿಂದಿಕ್ಕಿದೆ.
ಭಾರತೀಯರು ಹೆಮ್ಮೆ ಪಡಬೇಕಾದ ಇನ್ನೊಂದು ವಿಷಯವೆಂದರೆ ಜಗತ್ತಿನ ಅತಿ ಪ್ರಸಿದ್ಧ ಯಾತ್ರಿಕ ಸ್ಥಳಗಳಾದ ವ್ಯಾಟಿಕನ್ ಮತ್ತು ಮೆಕ್ಕಾದ ಹಜ್ ಗೆ ಬರುವ ಯಾತ್ರಿಕರ ಸಂಖ್ಯೆಯನ್ನು ಕೂಡ  ಈ ಬಾರಿ ವಾರಣಾಸಿ ಹಿಂದಿಕ್ಕಿದೆ. 

ಕ್ರಿಶ್ಚಿಯನ್ನರ  ಪವಿತ್ರ ಕ್ಷೇತ್ರವಾದ ವ್ಯಾಟಿಕನ್ ಸಿಟಿಗೆ ಬಂದ ಯಾತ್ರಿಕರ ಸಂಖ್ಯೆಗೆ ಹೋಲಿಸಿದರೆ ವಾರಣಾಸಿಯ ಯಾತ್ರಿಕರ ಸಂಖ್ಯೆ ಸುಮಾರು 46ಪಟ್ಟು ಹೆಚ್ಚಿದೆ. ಹಾಗೆಯೇ ಮೆಕ್ಕಾದ ಹಜ್ ಮತ್ತು ಒಮ್ರಾಯತ್ರಿಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ ವಾರಣಾಸಿಯ ಯಾತ್ರಿಕರ ಸಂಖ್ಯೆ ಹೆಚ್ಚೇ ಇದೆ. ಈ ಮೂಲಕ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ  ವಿಶ್ವದ ಪ್ರಸಿದ್ಧ ಸ್ಥಳಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಾರಣಾಸಿ ತನ್ನ ಹೆಸರನ್ನು ಬರೆದುಕೊಂಡಿದೆ.

ಭಾರತ ಮೂಲಸೌಕರ್ಯದ ಅಭಿವೃದ್ಧಿ ಹೊಸ ಶಖೆಯತ್ತ ದಾಪುಗಾಲು ಹಾಕುತ್ತಿದೆ ಎಂದು ಜಗತ್ತಿಗೆ ತಿಳಿಸಲು ಇದೊಂದು ಪ್ರಮುಖವಾದ ಮೈಲಿಗಲ್ಲು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Post a Comment

0 Comments