'ಇನ್ನು ತಡವಾಗುವ ಮೊದಲು ಕ್ಯೂಬಾ ಒಪ್ಪಂದಕ್ಕೆ ಬರಬೇಕು' - ಟ್ರಂಪ್ ಎಚ್ಚರಿಕೆ!

ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಕ್ಯೂಬಾಗೆ ಇನ್ನು ಮುಂದೆ ತೈಲ ಅಥವಾ ಹಣ ಲಭ್ಯವಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯೂಬಾಕ್ಕೆ ಎಚ್ಚರಿಕೆ ನೀಡಿದ್ದಾರೆ. 


ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್ ಮೀಡಿಯಾ handle Truth ನಲ್ಲಿ ಬರೆದುಕೊಂಡಿರುವ ಟ್ರಂಪ್, ಈ ಹಿಂದೆ ಕ್ಯೂಬಾ ವೆನೆಜುವೆಲಾದ ತೈಲ ಮತ್ತು ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿತ್ತು ಎಂದು ಉಲ್ಲೇಖಿಸಿದ್ದು, ಆ ಬೆಂಬಲ ಸದ್ಯದಲ್ಲೇ ಕೊನೆಗೂಳ್ಳುತ್ತಿದೆ ಎಂದು ತಿಳಿಸಿದ್ದಾರೆ. “ ಇನ್ನು ತಡವಾಗುವ ಮೊದಲು ಕ್ಯೂಬಾ ಒಪ್ಪಂದಕ್ಕೆ ಬರಬೇಕು” ಎಂದು ಟ್ರಂಪ್ ಹೇಳಿದ್ದಾರೆ.


ವೆನೆಜುವೆಲಾದಲ್ಲಿ ಇತ್ತೀಚೆಗೆ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯ  ಕೆಲವೇ ದಿನಗಳಲ್ಲಿ ಈ ಎಚ್ಚರಿಕೆ ಬಂದಿದ್ದು, ಇದರಿಂದ ಅಮೆರಿಕಾ–ಕ್ಯೂಬಾ ಸಂಬಂಧ ಇನ್ನಷ್ಟು  ಜಟಿಲವಾಗಲಿದೆ ಎಂದು ಹೇಳಲಾಗುತ್ತಿದೆ.


America | Trump | Cuba

Post a Comment

0 Comments