ಭಾರೀ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಚಿಲಿ ದೇಶದಲ್ಲಿ 'ರಾಷ್ಟ್ರೀಯ ತುರ್ತು ಸ್ಥಿತಿ' ಘೋಷಣೆ!

ಸಾಂಟಿಯಾಗೋ, ಚಿಲಿ: ಚಿಲಿಯ ದಕ್ಷಿಣ ಭಾಗದ ಹಲವಾರು ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಭಾರೀ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಚಿಲಿ ಸರ್ಕಾರವು ರಾಷ್ಟ್ರೀಯ ತುರ್ತು ಸ್ಥಿತಿ (State of Catastrophe) ಘೋಷಿಸಿದೆ.


 ತೀವ್ರ ಉಷ್ಣತೆ, ವಿಪರೀತ ಗಾಳಿ ಹಾಗೂ ಒಣ ಹವಾಮಾನದಿಂದಾಗಿ ಬೆಂಕಿ ನಿಯಂತ್ರಣ ಮಾಡುವುದು ಸವಾಲಾಗಿದೆ. ನಿಯಂತ್ರಣ ಕ್ಕೆ ಸಿಗದ ಬೆಂಕಿಯಿಂದಾಗಿ ಅಪಾರ ನಷ್ಟ ಉಂಟಾಗಿದೆ.

ಈವರೆಗೆ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನ್ಯೂಬ್ಲೆ ಮತ್ತು ಬಿಯೊಬಿಯೊ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಆರ್ಭಟ ಮುಂದುವರಿದಿದೆ.

ರಾಷ್ಟ್ರಪತಿ ಗ್ಯಾಬ್ರಿಯಲ್ ಬೋರಿಕ್ ಅವರು ಎಲ್ಲಾ ಸರ್ಕಾರಿ ಸಂಪನ್ಮೂಲಗಳನ್ನು ಅಗ್ನಿಶಾಮಕ ಕಾರ್ಯಾಚರಣೆಗೆ ನಿಯೋಜಿಸಲಾಗುವುದಾಗಿ ತಿಳಿಸಿದ್ದು, ಸೇನೆ ಸಹಿತ ತುರ್ತು ಸೇವೆಗಳ ಸಹಾಯ ಪಡೆಯಲಾಗುತ್ತಿದೆ. 

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದ್ದು ರಕ್ಷಣಾ ಕಾರ್ಯಾಚರಣೆ ಭರದಲ್ಲಿ ಸಾಗಿದೆ. ಬೆಂಕಿಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Post a Comment

0 Comments