ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಸೋಮವಾರ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ದೀರ್ಘಕಾಲದ ಮಂಡಿನೋವಿನ (ಮೋಣಕಾಲು) ಸಮಸ್ಯೆಯಿಂದಾಗಿ ಉನ್ನತ ಮಟ್ಟದ ಕ್ರೀಡಾಕೂಟದಲ್ಲಿ ಅಗತ್ಯವಿರುವ ದೈಹಿಕ ಒತ್ತಡವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ್ದ ಮೂರು ಅತೀ ದೊಡ್ಡ ಪ್ರತಿಸ್ಪರ್ಧಿಗಳನ್ನು ಒಮ್ಮೆ ಉಲ್ಲೇಖಿಸಿದ್ದರು. ಜೊತೆಗೆ, ಸಮಕಾಲೀನ ಆಟಗಾರ್ತಿ ಪಿ.ವಿ. ಸಿಂಧು ಅವರೊಂದಿಗೆ ಯಾವುದೇ ವೈರಾಗ್ಯ ಅಥವಾ ಪೈಪೋಟಿ ಇಲ್ಲವೆಂದು ಅವರು ಒತ್ತಿ ಹೇಳಿದ್ದಾರೆ.
0 Comments