ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಇಂದು ಭಾರತೀಯ ವಾಯುಪಡೆಗೆ (IAF) ಸೇರಿದ ತರಬೇತಿ ವಿಮಾನವೊಂದು ಕೆರೆಯೊಂದರಲ್ಲಿ ಪತನಗೊಂಡ ಘಟನೆ ಸಂಭವಿಸಿದೆ.
ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದ್ದು, ಪತನಗೊಳ್ಳುವ ಮೊದಲೇ ಪೈಲಟ್ ವಿಮಾನದಿಂದ ಹೊರ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಹಾಗೂ ನಾಗರಿಕ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಪತನಗೊಂಡ ವಿಮಾನವು ‘ಮೈಕ್ರೊಲೈಟ್’ ತರಬೇತಿ ವಿಮಾನವಾಗಿದ್ದು, ತರಬೇತಿ ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪೈಲಟ್ ನಿರ್ಜನ ಪ್ರದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಪರಿಣಾಮವಾಗಿ ವಿಮಾನ ಕೆರೆಯೊಳಗೆ ಬಿದ್ದಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಭಾರತೀಯ ವಾಯುಪಡೆ ನ್ಯಾಯಾಂಗ ತನಿಖೆ (Court of Inquiry)ಗೆ ಆದೇಶಿಸಿದೆ.
0 Comments