ಅನೇಕ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ತುರ್ತು ಸ್ಥಗಿತ - ಯುದ್ಧ ಭೀತಿ!


ಟೆಹ್ರಾನ್: ಇರಾನ್‌ನಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅನೇಕ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಸೇವೆಗಳನ್ನು ರದ್ದುಪಡಿಸಿದ್ದು, ಕೆಲವು ಸಂಸ್ಥೆಗಳು ವಿಮಾನ ಮಾರ್ಗಗಳನ್ನು ಬದಲಾಯಿಸಿರುವುದು ವರದಿಯಾಗಿದೆ.
ಇರಾನ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿ ವಿಮಾನ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಯುರೋಪ್, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಪ್ರಮುಖ ಏರ್‌ಲೈನ್ಸ್‌ಗಳು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇರಾನ್‌ನ ಗಗನಮಾರ್ಗವನ್ನು ತಾತ್ಕಾಲಿಕವಾಗಿ ಬಳಸುವುದನ್ನು ನಿಲ್ಲಿಸಿದ್ದಿವೆ. ಇದರ ಪರಿಣಾಮವಾಗಿ ಹಲವು ದೇಶಗಳಿಗೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳು ರದ್ದಾಗಿವೆ ಅಥವಾ ಪರ್ಯಾಯ ಮಾರ್ಗಗಳಿಂದ ಹಾರಾಟ ನಡೆಸಲಾಗುತ್ತಿದೆ.


ಭಾರತೀಯ ವಿಮಾನಯಾನ ಸಂಸ್ಥೆಗಳೂ ಸಹ ಇರಾನ್ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಕೆಲವು ಅಂತರರಾಷ್ಟ್ರೀಯ ಮಾರ್ಗಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ತಿಳಿಸಿವೆ. ಪ್ರಯಾಣಿಕರಿಗೆ ಮುಂಚಿತ ಮಾಹಿತಿ ನೀಡಿ ಟಿಕೆಟ್ cancel ಅಥವಾ rescedule ಆಯ್ಕೆಯನ್ನು ನೀಡಲಾಗುತ್ತಿದೆ.


ಅಧಿಕಾರಿಗಳ ಪ್ರಕಾರ, ಭದ್ರತಾ ಅಪಾಯಗಳು ಸ್ಪಷ್ಟವಾಗುವವರೆಗೆ ಈ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ, ಸಂಬಂಧಿಸಿದ ಏರ್‌ಲೈನ್‌ಗಳ ಸೂಚನೆಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.

Post a Comment

0 Comments