ದೆಹಲಿಯಲ್ಲಿ ಸಾರ್ವಜನಿಕ ಭದ್ರತೆ ಕುರಿತಾಗಿ ಗಂಭೀರ ಆತಂಕ ಮೂಡಿಸುವ ಅಂಕಿಅಂಶಗಳು ಹೊರಬಿದ್ದಿವೆ. 2026ರ ಮೊದಲ 15 ದಿನಗಳ ಅವಧಿಯಲ್ಲಿ ಮಾತ್ರವೇ ಒಟ್ಟು 807 ಜನರು ನಾಪತ್ತೆಯಾಗಿರುವುದು ದಾಖಲಾಗಿದೆ.
ಅಂದರೆ ದಿನಕ್ಕೆ ಸರಾಸರಿ 50ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಬೆಳವಣಿಗೆ ರಾಜಧಾನಿಯ ಕಾನೂನು-ಸುವ್ಯವಸ್ಥೆ ಮತ್ತು ನಾಗರಿಕರ ಸುರಕ್ಷತೆ ಕುರಿತು ತೀವ್ರ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ನಾಪತ್ತೆಯಾಗಿರುವವರಲ್ಲಿ ಮಹಿಳೆಯರು ಮತ್ತು ಹುಡುಗಿಯರ ಪ್ರಮಾಣ ಹೆಚ್ಚಾಗಿದೆ. ಜೊತೆಗೆ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾಮಾಜಿಕ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ.
ನಾಪತ್ತೆ ಪ್ರಕರಣಗಳಲ್ಲಿ ಕೆಲವು ಜನರನ್ನು ಪೊಲೀಸರು ಪತ್ತೆಹಚ್ಚಿದ್ದರೂ, ನೂರಾರು ಮಂದಿ ಇನ್ನೂ ಪತ್ತೆಯಾಗದೆ ಇರುವುದರಿಂದ ಕುಟುಂಬಸ್ಥರ ಆತಂಕ ಮುಂದುವರಿದಿದೆ.
ಈ ಪ್ರಕರಣಗಳ ಹಿನ್ನೆಲೆಯಲ್ಲಿ, ಮಾನವ ಕಳ್ಳ ಸಾಗಣೆ (Human Trafficking) ಜಾಲಗಳ ಪಾತ್ರವಿರಬಹುದೇ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕ ಸಂಘಟನೆಗಳು, ಯುವಕರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುವ ಅಪರಾಧ ಜಾಲಗಳ ಬಗ್ಗೆ ಪೊಲೀಸ್ಎ ಇಲಾಖೆ ಎಚ್ಚರಿಕೆ ನೀಡಿದೆ. ಆಡಳಿತದ ವಿವಿಧ ಇಲಾಖೆಗಳ ನಡುವೆ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದರೂ, ಪರಿಣಾಮಕಾರಿಯಾಗಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚುವ ಪ್ರಯತ್ನ ಜಾರಿಯಲ್ಲಿದೆ.
ನಗರದ ಹಲವು ಪ್ರದೇಶಗಳಲ್ಲಿ ಸಮರ್ಪಕ ಬೀದಿ ದೀಪಗಳ ಕೊರತೆ, ರಾತ್ರಿ patrolling ಆಗದಿರುವುದು ಮತ್ತು ಸಿಸಿ ಟಿವಿ ನಿಗಾವ್ಯವಸ್ಥೆಯ ದುರ್ಬಲತೆಗಳು ಈ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿವೆ. ನಾಗರಿಕರು ತಮ್ಮ ನಿವಾಸ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವಂತೆ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ, ನಾಪತ್ತೆ ಪ್ರಕರಣಗಳ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿದ್ದು, ಸಾರ್ವಜನಿಕರಲ್ಲಿ ಅನುಮಾನ ಬರುವ ರೀತಿಯ ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಅದೇ ವೇಳೆ, ನಾಗರಿಕರು ಜಾಗರೂಕರಾಗಿದ್ದು, ಕುಟುಂಬ ಸದಸ್ಯರ ಚಲನವಲನ ಕುರಿತು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
0 Comments