ಇಂಡೋನೇಷ್ಯಾಕ್ಕೆ 35 ಸಾವಿರ ಸ್ಕಾರ್ಪಿಯೋ ಪಿಕ್ ಅಪ್ ವಾಹನಗಳು: ಇತಿಹಾಸ ಬರೆದ ದೇಶದ ಅತಿದೊಡ್ಡ ವಿದೇಶಿ ರಫ್ತು ಒಪ್ಪಂದ!

ನವದೆಹಲಿ:

ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ & ಮಹೀಂದ್ರಾ ತನ್ನ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ರಫ್ತು ಒಪ್ಪಂದವನ್ನು ಪಡೆದುಕೊಂಡಿದೆ.


 ಇಂಡೋನೇಷ್ಯಾದ ಸರ್ಕಾರಿ ಸಹಯೋಗದಲ್ಲಿರುವ ಸಂಸ್ಥೆಯಾದ ಅಗ್ರಿನಾಸ್ ಪಂಗನ್ ನುಸಂತರಾ ಜೊತೆ ಮಾಡಿಕೊಂಡಿರುವ ಒಪ್ಪಂದದಡಿ, 35 ಸಾವಿರ ಸ್ಕಾರ್ಪಿಯೋ ಪಿಕ್ ಅಪ್ ವಾಹನಗಳನ್ನು ಪೂರೈಸಲು ಮಹೀಂದ್ರಾ ಮುಂದಾಗಿದೆ.

ಈ ವಾಹನಗಳನ್ನು ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ತಯಾರಿಸಲಾಗಲಿದ್ದು, 2026ರಿಂದ ಹಂತ ಹಂತವಾಗಿ ಇಂಡೋನೇಷ್ಯಾಕ್ಕೆ ರಫ್ತು ಮಾಡಲಾಗುತ್ತದೆ. 

ಗ್ರಾಮೀಣ ಲಾಜಿಸ್ಟಿಕ್ಸ್, ಕೃಷಿ ಚಟುವಟಿಕೆಗಳು, ಸಣ್ಣ ಉದ್ಯಮಗಳು ಮತ್ತು ದಿನನಿತ್ಯದ ವ್ಯಾಪಾರ ಚಟುವಟಿಕೆಗಳಿಗೆ ಈ ವಾಹನಗಳನ್ನು ಬಳಸಲಾಗುವುದು ಎಂದು ಅಗ್ರಿನಾಸ್ ಹೇಳಿಕೊಂಡಿದೆ. 


ಈ ಮಹತ್ವದ ಒಪ್ಪಂದವು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ಉತ್ತೇಜನ ನೀಡಿದ್ದು, ಭಾರತೀಯ ವಾಹನೋದ್ಯಮದ ಜಾಗತಿಕ ಹಾಜರಾತಿಯನ್ನು ಮತ್ತಷ್ಟು ಬಲಪಡಿಸಿದೆ. 

ಭಾರತೀಯ ಇಂಜಿನಿಯರಿಂಗ್ ಮತ್ತು ಉತ್ಪಾದನಾ ಸಾಮರ್ಥ್ಯದ ಮೇಲಿನ ಅಂತಾರಾಷ್ಟ್ರೀಯ ನಂಬಿಕೆಯನ್ನು ಈ ಒಪ್ಪಂದ ಪ್ರತಿಬಿಂಬಿಸುತ್ತದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.


ಮಹೀಂದ್ರಾ & ಮಹೀಂದ್ರಾ ಅಧಿಕಾರಿಗಳ ಪ್ರಕಾರ, ಈ ರಫ್ತು ಒಪ್ಪಂದವು ಭಾರತ–ಇಂಡೋನೇಷ್ಯಾ ಆರ್ಥಿಕ ಸಹಕಾರವನ್ನು ವಿಸ್ತರಿಸುವುದರ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ವಾಹನೋದ್ಯಮ ಎಕ್ಸ್ಪರ್ಟ್ ಗಳ ಅಭಿಪ್ರಾಯದಂತೆ, ಈ ಒಪ್ಪಂದವು ಮುಂದಿನ ದಿನಗಳಲ್ಲಿ ಭಾರತೀಯ ವಾಹನ ಕಂಪನಿಗಳಿಗೆ ಆಗ್ನೇಯ ಏಷ್ಯಾ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿಡಲಿದೆ.



Post a Comment

0 Comments