ಕೋಲ್ಕತಾದಲ್ಲಿ ಕಂಪಿಸಿದ ಭೂಮಿ — ಜನರಲ್ಲಿ ಆತಂಕ!

ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾ ದಲ್ಲಿ ಇಂದು ಭೂಕಂಪದ ಸಣ್ಣ ಕಂಪನಗಳು ಅನುಭವಕ್ಕೆ ಬಂದಿದೆ. ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಮಧ್ಯಮ ಪ್ರಮಾಣದ ಈ ಭೂಕಂಪದಿಂದ ನಗರದಲ್ಲಿನ ಕೆಲ ಭಾಗಗಳಲ್ಲಿ ಜನರು ಆತಂಕದಿಂದ ಮನೆಗಳಿಂದ ಹೊರಗೆ ಬಂದಿದ್ದಾರೆ.


ಭೂಕಂಪದ ಕೇಂದ್ರಬಿಂದು ಕುರಿತು ಭೂವಿಜ್ಞಾನ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿ ಹಾನಿ ವರದಿಯಾಗಿಲ್ಲ. 

ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನಾಗರಿಕರು ಆತಂಕಪಡದೆ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

Post a Comment

0 Comments