ಗಾಜಿಯಾಬಾದ್‌ನಲ್ಲಿ ಜನಪ್ರಿಯ ಎಕ್ಸ್-ಮುಸ್ಲಿಂ ಯೂಟ್ಯೂಬರ್ ಸಲೀಂ ವಾಸ್ತಿಕ್ ಮೇಲೆ ಚಾಕು ದಾ*ಳಿ — ಸ್ಥಿತಿ ಗಂಭೀರ!


ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಜನಪ್ರಿಯ ಎಕ್ಸ್-ಮುಸ್ಲಿಂ ಯೂಟ್ಯೂಬರ್  ಸಲೀಂ ವಾಸ್ತಿಕ್ ಮೇಲೆ ದುಷ್ಕರ್ಮಿಗಳು ಚಾಕು ದಾ*ಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. 


ಇಬ್ಬರು ವ್ಯಕ್ತಿಗಳು ಅವರ ಮನೆಗೆ ನುಗ್ಗಿ ಕುತ್ತಿಗೆ ಮತ್ತು ಹೊಟ್ಟೆ ಭಾಗಗಳಲ್ಲಿ ಅನೇಕ ಬಾರಿ ಇ*ರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಸಲೀಂ ವಾಸ್ತಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಘಟನೆ ನಡೆದಿದ್ದು ಗಾಝಿಯಾಬಾದ್ ಜಿಲ್ಲೆಯ ಲೋನಿ ಪ್ರದೇಶದಲ್ಲಿ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಸಲೀಂ ವಾಸ್ತಿಕ್ ಹಲವು ಟಿವಿ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಿದ್ಧಿ ಪಡೆದಿದ್ದರು.

Post a Comment

0 Comments