ನವದೆಹಲಿ: ಸುಮಾರು 13 ವರ್ಷಗಳಿಂದ ಕೋಮಾ- ಸ್ಥಿತಿಯಲ್ಲಿ ಬದುಕುತ್ತಿದ್ದ ಯುವಕ ಹರೀಶ್ ರಾಣಾ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ , ಜೀವನಾಧಾರ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಲು (Passive Euthanasia) ಅನುಮತಿ ನೀಡಿದೆ.
ವರದಿಗಳ ಪ್ರಕಾರ, ರಾಣಾ 2013ರ ಆಗಸ್ಟ್ 20ರಂದು ಚಂಡಿಗಢ ಯೂನಿವರ್ಸಿಟಿ ಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾಗ ತಮ್ಮ ಪೇಯಿಂಗ್ ಗೇಸ್ಟ್ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತೀವ್ರ ತಲೆಗಾಯಗೊಂಡಿದ್ದರು.
ಈ ಅಪಘಾತದ ಪರಿಣಾಮವಾಗಿ ಅವರು ಶಾಶ್ವತ ವೆಜಿಟೇಟಿವ್ ಸ್ಥಿತಿಗೆ ತಲುಪಿದ್ದು, ಸಂಪೂರ್ಣವಾಗಿ ವೈದ್ಯಕೀಯ ನೆರವಿನ ಮೇಲೆ ಅವಲಂಬಿತರಾಗಿದ್ದರು.
ಅಪಘಾತದ ನಂತರ ಹಲವು ವರ್ಷಗಳ ಕಾಲ ಚಿಕಿತ್ಸೆ ಪಡೆದರೂ ಚೇತರಿಕೆಯ ಯಾವುದೇ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ, ಅವರ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿ ಜೀವನಾಧಾರ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿತ್ತು.
ವೈದ್ಯಕೀಯ ತಜ್ಞರ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ರಾಣಾ ಚೇತರಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಪ್ಯಾಸಿವ್ ಯೂಥನೇಷಿಯಾ ಅನುಮತಿಸಿದೆ. ಈ ತೀರ್ಪು ಭಾರತದಲ್ಲಿ “ಗೌರವಯುತವಾಗಿ ಸಾಯುವ ಹಕ್ಕು” ಕುರಿತ ಕಾನೂನು ಮತ್ತು ನೈತಿಕ ಚರ್ಚೆಗೆ ಮತ್ತೆ ಒತ್ತು ನೀಡಿದೆ.
0 Comments