ಎರ್ಬಿಲ್‌ನ ಯುಎಇ ಕಾನ್ಸುಲೇಟ್ ಸಮೀಪ ಡ್ರೋನ್ ದಾಳಿ; 3 ಡ್ರೋನ್‌ಗಳನ್ನು ಹೊಡೆದುರುಳಿಸಿದ ಇರಾಕ್ ವಾಯು ರಕ್ಷಣಾ ಪಡೆ!

ಇರಾಕ್‌ನ ಕುರ್ದಿಸ್ತಾನ್ ಪ್ರದೇಶದ ರಾಜಧಾನಿಯಾದ ಎರ್ಬಿಲ್ ನಗರದಲ್ಲಿ ಇರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕಾನ್ಸುಲೇಟ್ ಸಮೀಪ ಡ್ರೋನ್ ದಾಳಿ ನಡೆದಿರುವ ಘಟನೆ ವರದಿಯಾಗಿದೆ. ಮಾರ್ಚ್ 9ರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಇರಾಕಿ ಕುರ್ದಿಸ್ತಾನದ ಕೌಂಟರ್-ಟೆರರಿಸಂ ಸೇವೆಯ ಮಾಹಿತಿ ಪ್ರಕಾರ, ನಗರತ್ತ ಬರುತ್ತಿದ್ದ ಮೂರು ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ

ಅವುಗಳಲ್ಲಿ ಒಂದರ ಅವಶೇಷಗಳು ಯುಎಇ ಕಾನ್ಸುಲೇಟ್ ಸಮೀಪ ಬಿದ್ದ ಕಾರಣ, ಆ ಪ್ರದೇಶದಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದೆ.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಾನ್ಸುಲೇಟ್ ಕಟ್ಟಡದ ಸುತ್ತಮುತ್ತ ಸ್ವಲ್ಪ ಹಾನಿ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.


ಈ ದಾಳಿಯನ್ನು ಯುಎಇ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಕಾನ್ಸುಲೇಟ್ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ ಎಂದು ಅದು ಹೇಳಿದೆ.

ಮಧ್ಯಪೂರ್ವ ಪ್ರದೇಶದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಮತ್ತು ಸೈನಿಕ ಉದ್ವಿಗ್ನತೆ ನಡುವೆ ಈ ಘಟನೆ ಸಂಭವಿಸಿರುವುದು ಗಮನಾರ್ಹವಾಗಿದೆ.


Post a Comment

0 Comments