ತೇಹ್ರಾನ್ | ಮಾರ್ಚ್ 1, 2026
ಇರಾನ್ ಸರ್ವಾಧಿಕಾರಿ ಅಧ್ಯಕ್ಷರಾಗಿದ್ದ ಆಯಾತುಲ್ಲ ಅಲಿ ಖಮೇನಿ ನಿನ್ನೆ ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಇರಾನ್ ರಾಷ್ಟ್ರೀಯ ಮಾಧ್ಯಮಗಳು ಅಧಿಕೃತವಾಗಿ ಪ್ರಕಟಿಸಿವೆ. 86 ವರ್ಷದ ಖಮೇನಿ ಫೆಬ್ರವರಿ 28ರಂದು ನಡೆದ ದಾಳಿಗಳ ವೇಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಖಮೇನಿ ಅವರು 1989ರಿಂದ ಇರಾನ್‌ನ ಸುಪ್ರೀಂ ಲೀಡರ್ ಆಗಿ ಸೇವೆ ಆಳುತ್ತಿದ್ದರು. ಖಮೇನಿ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.
ಈ ಬೆಳವಣಿಗೆ ಇರಾನ್ ಹಾಗೂ ಮಧ್ಯಪೂರ್ವ ಪ್ರದೇಶದ ರಾಜಕೀಯ ಪರಿಸ್ಥಿತಿಗೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
0 Comments