ಇರಾನ್‌ನಲ್ಲಿ ತಾತ್ಕಾಲಿಕ ಆಡಳಿತ ಮಂಡಳಿ ರಚನೆ: ಅಧಿಕಾರ ವಹಿಸಿಕೊಂಡ ಅಲಿರೆಜಾ ಅರಾಫಿ!

ತೆಹ್ರಾನ್, ಇರಾನ್:

ಇರಾನ್‌ನ ದೀರ್ಘಕಾಲದ ಸುಪ್ರೀಂ ಲೀಡರ್ ಆಗಿದ್ದ ಅಲಿ ಖಮೇನಿ ಯ ಸಾವಿನ ವರದಿಗಳ ನಂತರ, ದೇಶದಲ್ಲಿ ಸಂವಿಧಾನಾನುಸಾರ ತಾತ್ಕಾಲಿಕ ಆಡಳಿತ ವ್ಯವಸ್ಥೆ ಜಾರಿಗೊಂಡಿದೆ. 


ಇರಾನ್ ಸಂವಿಧಾನದ ಪ್ರಕಾರ, ಸುಪ್ರೀಂ ಲೀಡರ್ ಹುದ್ದೆ ಖಾಲಿಯಾದಾಗ ತಾತ್ಕಾಲಿಕ Interim Leadership Council ರಚಿಸಲಾಗುತ್ತದೆ.

ಈ ತಾತ್ಕಾಲಿಕ ಮಂಡಳಿಯಲ್ಲಿ ಹಿರಿಯ ಧಾರ್ಮಿಕ ನಾಯಕ ಅಲಿರೇಝ ಆರಾಫಿ ಅವರನ್ನು ಧಾರ್ಮಿಕ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. 



ಜೊತೆಗೆ, ಇರಾನ್ ಅಧ್ಯಕ್ಷ ಮಸೂದ್ ಪೇಜ್ಶಕೀಯನ್ ಹಾಗೂ ಮುಖ್ಯ ನ್ಯಾಯಮೂರ್ತಿ ಘೋಲಂ - ಹುಸ್ಸೇನ್ ಮೊಹಸೇನಿ - ಇಜೆಯಿ ಕೂಡ ಈ ಮಂಡಳಿಯ ಸದಸ್ಯರಾಗಿದ್ದಾರೆ.

ಮಂಡಳಿಯು ದೇಶದ ಆಡಳಿತ ಹಾಗೂ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿರ್ವಹಿಸಲಿದೆ. 


ಹೊಸ ಸುಪ್ರೀಂ ಲೀಡರ್ ಆಯ್ಕೆಯಾಗುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಇರಾನ್‌ನ ರಾಜಕೀಯ ಪರಿಸ್ಥಿತಿ ಮಹತ್ವದ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳತ್ತ ವಿಶ್ವದ ಗಮನ ಕೇಂದ್ರೀಕೃತವಾಗಿದೆ.


ಕೆಲವೇ ಗಂಟೆಗಳಲ್ಲಿ ಈತನನ್ನು ಕೂಡ ಇಸ್ರೇಲ್ ಹೊಡೆದುರುಳಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. 

Post a Comment

0 Comments