ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಸೆಂಟ್ರಲ್ ಜೈಲಿನ ಹೊಸ ಅಧೀಕ್ಷಕರಾಗಿ ಸಬಾ ಶಾವಲ್ ನೇಮಕಗೊಂಡಿದ್ದಾರೆ.
ಡಿಜಿಪಿ ಪ್ರಿಸನ್ಸ್ ಅವರ ಕೆಳಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಇದೀಗ ಸೆಂಟ್ರಲ್ ಜೈಲು ಶ್ರೀನಗರದ ಅಧೀಕ್ಷಕರಾಗಿ ವರ್ಗಾಯಿಸಲಾಗಿದೆ.
2012ರಲ್ಲಿ ಜಮ್ಮು ಮತ್ತು ಕಾಶ್ಮೀರ ಪಬ್ಲಿಕ್ ಸರ್ವೀಸ್ ಕಮಿಷನ್ (JKPSC) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ‘ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಪ್ರಿಸನ್ಸ್)’ ಹುದ್ದೆ ಪಡೆದಿದ್ದರು.
ಸೆಂಟ್ರಲ್ ಜೈಲು ಶ್ರೀನಗರದ ನೇತೃತ್ವ ವಹಿಸಿದ ಮೊದಲ ಕಾಶ್ಮೀರಿ ಮಹಿಳೆ ಎಂಬ ಹೆಗ್ಗಳಿಕೆಗೆ ಸಬಾ ಶಾವಲ್ ಪಾತ್ರರಾಗಿದ್ದಾರೆ.
0 Comments