ಭಾರತದಿಂದ ಬ್ರಹ್ಮೋಸ್ ಖರೀದಿಸಲಿದೆ ಇಂಡೋನೇಷ್ಯಾ; ಎರಡು ದೇಶಗಳಲ್ಲಿ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ!


ನವದೆಹಲಿ / ಜಕಾರ್ತಾ: ಇಂಡೋನೇಷ್ಯಾ ಸರ್ಕಾರವು ಭಾರತದಿಂದ ಬ್ರಹ್ಮೋಸ್ ಸೂಪರ್‌ಸೋನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಇಂಡೋನೇಷ್ಯಾ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.


 ಈ ಒಪ್ಪಂದವು ಇಂಡೋನೇಷ್ಯಾದ ಸೇನಾ ಸಾಮರ್ಥ್ಯವನ್ನು, ವಿಶೇಷವಾಗಿ ಸಮುದ್ರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಮತ್ತು ರಷ್ಯಾ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ್ದು, ಇದು ಅತ್ಯಂತ ವೇಗವಾಗಿ ಗುರಿ ತಲುಪುವ ಸೂಪರ್‌ಸೋನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ. 


ಭೂಮಿ, ನೌಕಾಪಡೆ ಮತ್ತು ವಿಮಾನಗಳಿಂದ ಈ ಕ್ಷಿಪಣಿಯನ್ನು ಉಡಾಯಿಸಲು ಸಾಧ್ಯವಾಗುತ್ತದೆ.

ಈ ಒಪ್ಪಂದದ ಮೌಲ್ಯವನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಆದರೆ ಹಿಂದೆ ಬಂದ ವರದಿಗಳ ಪ್ರಕಾರ ಈ ಒಪ್ಪಂದದ ಮೌಲ್ಯವು ಸುಮಾರು 200 ಮಿಲಿಯನ್ ಡಾಲರ್‌ರಿಂದ 350 ಮಿಲಿಯನ್ ಡಾಲರ್‌ಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.


ಫಿಲಿಪೈನ್ಸ್ ನಂತರ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸುವ ಎರಡನೇ ವಿದೇಶಿ ದೇಶವಾಗಿ ಇಂಡೋನೇಷ್ಯಾ ಹೊರಹೊಮ್ಮುವ ಸಾಧ್ಯತೆಯಿದೆ.

 ಈ ಒಪ್ಪಂದವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.



Post a Comment

0 Comments