ಪರ್ಷಿಯನ್ ಗಲ್ಪ್ ಸಮುದ್ರದಲ್ಲಿ ಇರುವ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ Kharg Island ಮೇಲೆ ನಡೆದ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ವಿದೇಶಿ ಮಾಧ್ಯಮಗಳ ವರದಿಗಳ ಪ್ರಕಾರ, ಅಮೆರಿಕದ ಪಡೆಗಳು ದ್ವೀಪದಲ್ಲಿರುವ ಇರಾನ್‌ನ ಸೈನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿಗಳನ್ನು ನಡೆಸಿವೆ.
ಈ ದಾಳಿಯಲ್ಲಿ ಕ್ಷಿಪಣಿ ಸಂಗ್ರಹಣಾ ಕೇಂದ್ರಗಳು, ನೌಕಾ ಮೈನ್ಸ್ ಗುದಾಮುಗಳು ಹಾಗೂ ಕೆಲವು ಸೈನಿಕ ತಾಣಗಳು ಹಾನಿಗೊಳಗಾಗಿರುವುದಾಗಿ ತಿಳಿದುಬಂದಿದೆ.
ಪರ್ಷಿಯನ್ ಗಲ್ಪ್ ಪ್ರದೇಶದಲ್ಲಿರುವ ಖಾರ್ಗ್ ದ್ವೀಪವು ಇರಾನ್‌ನ ತೈಲ ರಫ್ತು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿದೆ. ದೇಶದ ಒಟ್ಟು ತೈಲ ರಫ್ತಿನ ಸುಮಾರು 90 ಶೇಕಡಾ ಭಾಗ ಇದೇ ದ್ವೀಪದ ಮೂಲಕ ಸಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಇಲ್ಲಿ ನಡೆದ ಯಾವುದೇ ದಾಳಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ದಾಳಿಯಲ್ಲಿ ತೈಲ ರಫ್ತು ಟರ್ಮಿನಲ್‌ಗಳನ್ನು ನೇರವಾಗಿ ಗುರಿಯಾಗಿಸಲಾಗಿಲ್ಲ. ತೈಲ ಸಾಗಾಟ ಕಾರ್ಯಾಚರಣೆಗಳು ಇನ್ನೂ ಮುಂದುವರಿಯುತ್ತಿವೆ ಎಂದು ವರದಿಗಳು ತಿಳಿಸಿವೆ.
ಇದರ ನಡುವೆಯೇ ಇರಾನ್ ಅಧಿಕಾರಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ದೇಶದ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಪ್ರಾದೇಶಿಕವಾಗಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ಖಾರ್ಗ್ ದ್ವೀಪದ ಮೇಲಿನ ಈ ದಾಳಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಘಟನೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದರ ಮೇಲೆ ಜಾಗತಿಕ ತೈಲ ಮಾರುಕಟ್ಟೆಯೂ ಕಣ್ಣಿಟ್ಟಿದೆ.
0 Comments