ದುಬೈ ಮೆರಿನಾ ಪ್ರದೇಶದಲ್ಲಿ ಕಟ್ಟಡಗಳಿಂದ ಜನರ ತೆರವು – ಕ್ಷಿಪಣಿ intercept ಬಳಿಕ ಅವಶೇಷ ಬಿದ್ದು ಸಣ್ಣ ಹಾನಿ!


ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ನಗರದಲ್ಲಿರುವ ದುಬೈ ಮೆರಿನಾ ಪ್ರದೇಶದ ಸುತ್ತಮುತ್ತಲಿನ ಕೆಲವು ಕಟ್ಟಡಗಳನ್ನು ಶನಿವಾರ ಮುನ್ನೆಚ್ಚರಿಕೆಯಾಗಿ ಖಾಲಿ ಮಾಡಿಸಲಾಯಿತು.


 ಯುಎಇ ವಾಯು ರಕ್ಷಣಾ ವ್ಯವಸ್ಥೆ ಗಗನದಲ್ಲಿ ಬಂದ ಅಪಾಯವನ್ನು ತಡೆದ ನಂತರ ಅದರ ಅವಶೇಷಗಳು ಒಂದು ಗಗನಚುಂಬಿ ಕಟ್ಟಡದ ಹೊರಭಾಗಕ್ಕೆ ಬಿದ್ದು ಸಣ್ಣ ಹಾನಿ ಉಂಟಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ ಮೀಡಿಯಾ ಕಚೇರಿ ನೀಡಿದ ಹೇಳಿಕೆಯ ಪ್ರಕಾರ, ತಡೆಹಿಡಿದ ವಸ್ತುವಿನ ತುಂಡುಗಳು ಕಟ್ಟಡದ ಮುಖಭಾಗಕ್ಕೆ ಬಿದ್ದಿದ್ದು ಸಣ್ಣ ಘಟನೆ ನಡೆದಿದೆ, ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಲಾಗಿದೆ. ತುರ್ತು ಸೇವಾ ತಂಡಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ.


ಈ ಘಟನೆಯ ಹಿನ್ನೆಲೆಯಲ್ಲಿ ದುಬೈ ಮೆರಿನಾ ಪ್ರದೇಶದ ನಿವಾಸಿಗಳು ಹಾಗೂ ಪ್ರವಾಸಿಗರನ್ನು ಮುನ್ನೆಚ್ಚರಿಕೆಯಾಗಿ ಸ್ಥಳಾಂತರಿಸಲಾಯಿತು.

 ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಯನ್ನೂ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು.



ದುಬೈ ಮೆರಿನಾ ಪ್ರದೇಶವು ಪ್ರವಾಸಿಗರಿಗೆ ಪ್ರಸಿದ್ಧವಾದ ಪ್ರದೇಶವಾಗಿದ್ದು, ಅಮೆರಿಕನ್ ಯುನಿವರ್ಸಿಟಿ ಆಫ್ ದುಬೈ ಮತ್ತು ದುಬೈ ಮೆರಿನಾ ಮಾಲ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳ ಸಮೀಪದಲ್ಲಿದೆ.

 ಅಧಿಕಾರಿಗಳು ಸಾರ್ವಜನಿಕರು ಅಪಪ್ರಚಾರಗಳಿಗೆ ಒಳಗಾಗದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಮನವಿ ಮಾಡಿದ್ದಾರೆ.


Post a Comment

0 Comments