ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಎಲ್‌ಒಸಿ (Line of Control) ಭಾಗದಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಒಂದು ಭಾರತೀಯ ಗಡಿಭಾಗಕ್ಕೆ ನುಸುಳಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಭದ್ರತಾ ಸಿಬ್ಬಂದಿ ಡ್ರೋನ್ ಚಲನವಲನ ಗಮನಿಸಿ ತಕ್ಷಣವೇ ಗುಂಡಿನ ದಾಳಿ ನಡೆಸಿ ಅದನ್ನು ಹಿಮ್ಮೆಟ್ಟಿಸಲು ಕ್ರಮ ಕೈಗೊಂಡಿದ್ದಾರೆ. ಘಟನೆಯ ಬಳಿಕ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.
ಭದ್ರತಾ ಪಡೆಗಳು ಗಡಿಭಾಗದಲ್ಲಿ ನಿಗಾ ಹೆಚ್ಚಿಸಿದ್ದು, ಮುಂದಿನ ಪರಿಶೀಲನೆ ಮತ್ತು ತನಿಖೆ ಮುಂದುವರಿದಿದೆ.
0 Comments