ಜರ್ಮನಿಯಲ್ಲಿ ಐರನ್ ಡೋಮ್ ಬಿಡಿ ಭಾಗಗಳ ಉತ್ಪಾದನೆಗೆ ಇಸ್ರೇಲ್ ಜೊತೆ Volkswagen ಮಾತುಕತೆ!

ಜರ್ಮನಿಯ ಪ್ರಮುಖ ಕಾರು ತಯಾರಿಕಾ ಕಂಪನಿ Volkswagen ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದ Iron Domeಗಾಗಿ ಘಟಕಗಳನ್ನು ತಯಾರಿಸಲು ಮಾತುಕತೆ ನಡೆಸುತ್ತಿದೆ ಎಂಬ ವರದಿಗಳು ಹೊರಬಂದಿವೆ.


ಜರ್ಮನಿಯ ಒಸನಬ್ರಾಕ್  ನಗರದಲ್ಲಿರುವ ತನ್ನ ಸಂಕಷ್ಟದಲ್ಲಿರುವ ಕಾರ್ಖಾನೆಯಲ್ಲಿ ಈ ಉತ್ಪಾದನೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಒಪ್ಪಂದ ಜಾರಿಯಾದರೆ, ದ್ವಿತೀಯ ವಿಶ್ವಯುದ್ಧದ ನಂತರ Volkswagen ಮತ್ತೆ ಶಸ್ತ್ರಾಸ್ತ್ರ ಸಂಬಂಧಿತ ಉತ್ಪಾದನೆಗೆ ಮರಳುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತದೆ.


ವಿಶ್ಲೇಷಕರ ಪ್ರಕಾರ, ಈ ಕ್ರಮದ ಹಿಂದೆ ಹಲವು ತಂತ್ರಜ್ಞಾನ ಮತ್ತು ಆರ್ಥಿಕ ಕಾರಣಗಳಿವೆ. ಯುರೋಪಿನಲ್ಲಿ ವಾಹನೋದ್ಯಮವು ಇತ್ತೀಚಿನ ವರ್ಷಗಳಲ್ಲಿ ಮಂದಗತಿಯನ್ನು ಎದುರಿಸುತ್ತಿದ್ದು, ಉತ್ಪಾದನಾ ಘಟಕಗಳನ್ನು ಬಳಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿರುವುದು ಪ್ರಮುಖ ಕಾರಣವಾಗಿದೆ. 

ಇದೇ ವೇಳೆ, ಜಾಗತಿಕ ಭದ್ರತಾ ಪರಿಸ್ಥಿತಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚುತ್ತಿರುವುದು ಕೂಡ ಈ ರೀತಿಯ ಒಪ್ಪಂದಗಳಿಗೆ ದಾರಿ ಮಾಡಿಕೊಡುತ್ತಿದೆ.


ಇಸ್ರೇಲ್‌ನ Iron Dome ವ್ಯವಸ್ಥೆ ಕಡಿಮೆ ದೂರದ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಹಲವಾರು ಸಂಘರ್ಷಗಳ ಸಂದರ್ಭದಲ್ಲಿ ಇದರ ಪರಿಣಾಮಕಾರಿ ಕಾರ್ಯಕ್ಷಮತೆ ದೃಢಪಟ್ಟಿದೆ.

ಈ ಒಪ್ಪಂದದ ಕುರಿತು ಮಾತುಕತೆಯಷ್ಟೇ ನಡೆಯುತ್ತಿದ್ದು,  ಅಂತಿಮವಾಗುತ್ತದೆಯೇ ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ, ಇದು ಜರ್ಮನಿ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Post a Comment

0 Comments