ವೆನಿಜುವೆಲಾ ಮೇಲೆ ಅಮೆರಿಕಾದ ಭೀಕರ ದಾ*ಳಿ!

ಜನವರಿ 3ರ ಮುಂಜಾನೆ ವೆನಿಜುವೆಲಾದ ರಾಜಧಾನಿ ಕಾರಕಾಸ್ ಮತ್ತು ಇತರ ಕೆಲವು ಪ್ರದೇಶಗಳ ಮೇಲೆ ಅಮೆರಿಕ ಭೀಕರ ದಾ*ಳಿ ನಡೆಸಿದೆ. ಈ ಕುರಿತಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.



 ವರದಿಗಳ ಪ್ರಕಾರ ಬೆಳಗಿನ ಸುಮಾರು ಎರಡರಿಂದ ಮೂರು ಗಂಟೆಯ ವೇಳೆಯಲ್ಲಿ ವೆನಿಜುವೆಲ್ಲದ ರಾಜಧಾನಿ ಕಾರಕಾಸ್, ಅರ ಗುವಾ, ಮೀರಾಂಡ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಲ್ಲಿ ಕನಿಷ್ಠ 7-10 ಸ್ಫೋ*ಟಗಳು ದಾಖಲಾಗಿವೆ.
 ಸ್ಪೋ*ಟದ ಸದ್ದಿಗೆ ಎಚ್ಚರಗೊಂಡ ಸ್ಥಳೀಯ ಜನತೆ ಮನೆಯಿಂದ ಹೊರಬಂದು ನೋಡಿದಾಗ ಅನೇಕ ಯುದ್ಧ ವಿಮಾನಗಳು, ಹೆಲಿಕ್ಯಾಪ್ಟರ್ಗಳು ತುಂಬಾ ಕೆಳ ಮಟ್ಟದಲ್ಲಿ ಹಾರುವುದನ್ನು ಗಮನಿಸಿದ್ದಾರೆ. ಹಾಗೂ ಅನೇಕ ಸ್ಫೋ*ಟಗಳ ವಿಡಿಯೋಗಳನ್ನು ತಮ್ಮ ಮೊಬೈಲ್ ಮೂಲಕ ಸರಿ ಹಿಡಿದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ಜನರಲ್ಲಿ ಕಂಡುಬಂದ ಭಯ ಹಾಗೂ ಆತಂಕದ ವಾತಾವರಣ ಸ್ಪಷ್ಟವಾಗಿ ಕಂಡುಬರುತ್ತದೆ.



 ಅಮೆರಿಕಾದ ಅಧ್ಯಕ್ಷ ಟ್ರಂಪ್ ತಮ್ಮ  ಹೇಳಿಕೆಯಲ್ಲಿ 'ವೆನಿಜುವೆಲಾ ಮೇಲೆ ಅಮೆರಿಕ ಬಹಳ ದೊಡ್ಡ ಮಟ್ಟದ ದಾ*ಳಿಯನ್ನು ನಡೆಸಿದೆ. ಹಾಗೆಯೇ ಅಲ್ಲಿನ ಅಧ್ಯಕ್ಷ ಮಾಡುರೋ ಅವರನ್ನು ಪತ್ನಿ ಸಮೇತರಾಗಿ ದೇಶದಿಂದ ಹೊರ ತರಲಾಗಿದೆ. ಸುರಕ್ಷಿತವಾದ ಆಡಳಿತ ಜಾರಿಗೊಳಿಸಲು ಅಮೆರಿಕ ಪ್ರಯತ್ನ ಮಾಡಲಿದೆ. ಇನ್ನು ಹೆಚ್ಚಿನ ವಿವರಗಳನ್ನು ಮುಂದಕ್ಕೆ ತಿಳಿಸುತ್ತೇವೆ.' ಎಂದಿದ್ದಾರೆ. 



 ಇದೇ ವೇಳೆ ವೆನಿಜುವೆಲಾದ ಸರ್ಕಾರ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಮತ್ತು ಅಮೇರಿಕಾದ ಈ ದಾಳಿಯನ್ನು ಆಕ್ರಮ*ಣಕಾರಿಯಾಗಿ ಖಂಡಿಸಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ತಯಾರಾಗಬೇಕು ಎಂದು ತನ್ನ ದೇಶದ ಜನತೆಗೆ ಕರೆ ನೀಡಿದೆ.



 ಇತ್ತ ಅಮೆರಿಕಾದ ವಿರುದ್ಧ ಸದಾ ಶೀತಲ ಸಮ*ರದಲ್ಲಿ ನಿರತರಾಗಿರುವ ಚೀನಾ ಈ ದಾ*ಳಿಯನ್ನು ತೀವ್ರವಾಗಿ ಖಂಡಿಸಿದೆ. ಮತ್ತು ಈ ದಾಳಿಯನ್ನು 'ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ' ಎಂದು ಕರೆದಿದೆ. 
 ಚೀನಾ ಮಾತ್ರವಲ್ಲದೆ ಕೊಲಂಬಿಯಾ, ಮಿಕ್ಸಿಕೋ ಸೇರಿದಂತೆ ಇತರ ಅನೇಕ ರಾಷ್ಟ್ರಗಳು ಈ ದಾ*ಳಿಯನ್ನು ಖಂಡಿಸಿವೆ. ಇದು ಲ್ಯಾಟಿನ್ ಅಮೇರಿಕಾದ ಸ್ವಾಯತ್ತತೆಗೆ ಧಕ್ಕೆ ತರುವ ಹೆಜ್ಜೆ ಎಂದು ನೇರವಾಗಿ ಟೀಕಿಸಿವೆ.


 ದಾ*ಳಿಯ ಪರಿಣಾಮ ವೆನಿಜುವೆಲಾದ ರಾಜಧಾನಿ ಹಾಗೂ ಇನ್ನೂ ಅನೇಕ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ. ಅಲ್ಲಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದಾ*ಳಿಯಲ್ಲಿ ಸೈನಿಕ ಕಟ್ಟಡಗಳು ಹಾಗೂ ಸರ್ಕಾರಿ ಕಟ್ಟಡಗಳೇ ಹೆಚ್ಚಾಗಿ ಗುರಿಯಾಗಿರುವುದರಿಂದ ಅಲ್ಲಿನ ಜನ ಇನ್ನೂ ಹೆಚ್ಚು ಆತಂಕ ಪಡುವಂತಾಗಿದೆ.

 ಈತ ಅಮೆರಿಕ ತನ್ನ ನಾಗರಿಕರಿಗೆ ವೆನಿಜುವೆಲಾ ಪ್ರಯಾಣ ಮೋಟಕುಗೊಳಿಸುವಂತೆ ಸೂಚನೆ ನೀಡಿದೆ.

Post a Comment

0 Comments