ಕರ್ನಾಟಕದಲ್ಲಿ ದ್ವೇಷ ಭಾಷಣ ಖಾಯಿದೆ ಜಾರಿಯಾದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತನ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Billava Sandesh ಎನ್ನುವ ಹೆಸರಿರುವ handle ನಿಂದ ಈ ಪೋಸ್ಟ್ facebook ನಲ್ಲಿ ಹಾಕಲಾಗಿದ್ದು, ಇದು ಕರ್ನಾಟಕದ ಮೀಸಲು ಕ್ಷೇತ್ರದ ಶಾಸಕಿಯನ್ನು ನಿಂದಿಸುವ ಆಕ್ಷೇಪಾರ್ಹ ಪದಬಳಕೆ ಹೊಂದಿದೆ.
ಪೋಸ್ಟ್ ನಲ್ಲಿ ಶಾಸಕರ ಜಾತಿಯನ್ನು ಕೂಡ ಎಳೆದು ತರಲಾಗಿದ್ದು, ಜನ ಈ ಪೋಸ್ಟ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಹಾಗೂ ಈ ಪೋಸ್ಟ್ ಮಾಡಿರುವಾತ ಕಾಂಗ್ರೆಸ್ ಕಾರ್ಯಕರ್ತನ್ನಾಗಿದ್ದು 'ಈತನ ವಿರುದ್ಧ ಸರಕಾರ ಯಾವಾಗ ಕ್ರಮ ಕೈಗೊಳ್ಳುತ್ತೆ?' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಬಂಟ್ವಾಳ ಠಾಣೆಯಲ್ಲಿ BJP ಕಾರ್ಯಕರ್ತರು ಈತನ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
Karnataka | Hate Speech | FIR | Congress |
BJP | Dalit | MLA | Politics
0 Comments