SG ಮತ್ತು SS ಸೇರಿದಂತೆ ಹಲವು ಭಾರತೀಯ ಕ್ರಿಕೆಟ್ ಉಪಕರಣ ತಯಾರಿಕಾ ಕಂಪನಿಗಳು, ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರೊಂದಿಗೆ ಮಾಡಿಕೊಂಡಿದ್ದ ಎಲ್ಲಾ ಪ್ರಾಯೋಜಕತ್ವ ಒಪ್ಪಂದಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿರುವುದಾಗಿ ವರದಿಯಾಗಿದೆ.
ಬಾಂಗ್ಲಾದೇಶ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಈ ಮಹತ್ವದ ಬೆಳವಣಿಗೆ ಬಾಂಗ್ಲಾಕ್ಕೆ ಶಾಕ್ ಕೊಟ್ಟಿದೆ.
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ -ಇತ್ತೀಚೆಗೆ ಬರೆದ ಅಧಿಕೃತ ಪತ್ರದಲ್ಲಿ, ಭಾರತದಲ್ಲಿ ಪರಿಸ್ಥಿತಿಗಳು ಅನುಕೂಲವಾಗಿಲ್ಲ ಎಂದು ವಿವರಿಸಿರುವುದು ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಇದರಿಂದಾಗಿ ಭಾರತೀಯ ಬ್ರ್ಯಾಂಡ್‌ಗಳು ಮುಂದಿನ ದಿನಗಳಲ್ಲಿ ಈಗಿರುವ ಒಪ್ಪಂದಗಳನ್ನು ನವೀಕರಿಸದಿರಲು ಹಾಗೂ ಬಾಂಗ್ಲಾದೇಶದ ಆಟಗಾರರೊಂದಿಗೆ ಹೊಸ ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡದಿರಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯಿಂದಾಗಿ, ಹೆಚ್ಚಿನ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಭಾರತೀಯ ಕಂಪನಿಗಳಿಂದ ದೊರೆಯುವ ಈ ಬೆಳವಣಿಗೆಯಿಂದಾಗಿ, ಹೆಚ್ಚಿನ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಭಾರತೀಯ ಕಂಪನಿಗಳಿಂದ ದೊರೆಯುವ ಉನ್ನತ ಗುಣಮಟ್ಟದ ಕ್ರಿಕೆಟ್ ಉಪಕರಣಗಳ ಮೇಲೆ ಅವಲಂಬಿತರಾಗಿರುವುದರಿಂದ, ಅವರ ಕ್ರಿಕೆಟ್ ಸಾಮಗ್ರಿಗಳ ಸರಬರಾಜಿನಲ್ಲಿ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ನಿರ್ಧಾರ ಬಾಂಗ್ಲಾದೇಶದ ತರಬೇತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
0 Comments