ರಾಂಚಿ / ನವದೆಹಲಿ | ಫೆಬ್ರವರಿ 23, 2026
ರಾಂಚಿಯಿಂದ ನವದೆಹಲಿ ಕಡೆ ಹೊರಟಿದ್ದ ಏರ್ ಆಂಬ್ಯುಲೆನ್ಸ್ ವಿಮಾನವು ಟೇಕ್‌ಆಫ್ ಆದ ಕೆಲವೇ ನಿಮಿಷಗಳ ನಂತರ ಪತನಗೊಂಡು ಭಾರೀ ದುರಂತ ಸಂಭವಿಸಿದೆ.
ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ವಿಮಾನವು ಸೋಮವಾರ ಸಂಜೆ ಸುಮಾರು 7:11ರ ಸುಮಾರಿಗೆ ರಾಂಚಿಯಿಂದ ಹೊರಟಿದ್ದು, ಸುಮಾರು 20–23 ನಿಮಿಷಗಳ ನಂತರ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿದೆ.
ನಂತರ ವಿಮಾನವು ಝಾರ್ಖಂಡ್ ರಾಜ್ಯದ ಚಾತ್ರಾ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಪತನಗೊಂಡಿರುವುದು ಪತ್ತೆಯಾಗಿದೆ.
ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ ಪೈಲಟ್, ಸಹ ಪೈಲಟ್, ಗಂಭೀರ ಸ್ಥಿತಿಯಲ್ಲಿದ್ದ ರೋಗಿ, ವೈದ್ಯರು, ಪ್ಯಾರಾಮೆಡಿಕ್ ಸಿಬ್ಬಂದಿ ಹಾಗೂ ರೋಗಿಯ ಇಬ್ಬರು ಸಂಬಂಧಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಯಾರೂ ಜೀವಂತವಾಗಿ ಪಾರಾಗಿಲ್ಲ ಎಂದು ರಕ್ಷಣಾ ತಂಡಗಳು ದೃಢಪಡಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಟ್ಟ ಹವಾಮಾನ ಮತ್ತು ಗಾಳಿ ವಿಪರೀತ ಸ್ಥಿತಿಗಳು ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.
ಘಟನೆ ಕುರಿತು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹಾಗೂ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ಜಂಟಿಯಾಗಿ ತನಿಖೆ ಆರಂಭಿಸಿವೆ.
0 Comments