ಮಾಸ್ಕೊ : ರಷ್ಯಾ ಸರ್ಕಾರವು ಮೆಸೇಜಿಂಗ್ ವೇದಿಕೆ WhatsApp ಅನ್ನು ದೇಶಾದ್ಯಂತ ಅಧಿಕೃತವಾಗಿ ನಿರ್ಬಂಧಿಸಿದೆ. ಇದರ ಮಾತೃ ಸಂಸ್ಥೆ Meta ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ವಿಫಲವಾಗಿದೆ ಎಂದು ಸರ್ಕಾರ ಆರೋಪಿಸಿದೆ. ಈ ಕ್ರಮ ದೇಶದ ಕೋಟ್ಯಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
ವಿದೇಶಿ ತಂತ್ರಜ್ಞಾನ ಕಂಪನಿಗಳು ದೇಶದ ನಿಯಮಗಳನ್ನು ಪಾಲಿಸಬೇಕು ಎಂಬ ನೀತಿಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ನಾಗರಿಕರು ಸರ್ಕಾರ ಬೆಂಬಲಿತ ದೇಶೀಯ ಮೆಸೇಜಿಂಗ್ ಆಪ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ರಷ್ಯಾ ಇತ್ತೀಚೆಗೆ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಒಮ್ಮೆಗೇ ನಿರ್ಬಂಧಿಸಿದೆ ಎಂಬ ಸುದ್ದಿ ಓಡಾಡುತ್ತಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳು ಈಗಾಗಲೇ 2022ರಲ್ಲೇ ರಷ್ಯಾದಲ್ಲಿ ನಿರ್ಬಂಧಕ್ಕೊಳಗಾಗಿವೆ.
ತಜ್ಞರ ಪ್ರಕಾರ, ದೇಶದ ಡಿಜಿಟಲ್ ವ್ಯವಸ್ಥೆಯ ಮೇಲೆ ನಿಯಂತ್ರಣ ಬಲಪಡಿಸುವ ಹಾಗೂ ದೇಶದ ಹಿತ ದೃಷ್ಟಿಯಿಂದ ಈ ನೀತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ರಷ್ಯಾ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.
0 Comments