ಭಾರತೀಯ AI ಸ್ಟಾರ್ಟ್‌ಅಪ್‌ಗಳೊಂದಿಗೆ ಪ್ರಧಾನಿ ಮೋದಿ ರೌಂಡ್ ಟೇಬಲ್ ಸಭೆ!

ನವದೆಹಲಿ: ಭಾರತದ ಪ್ರಧಾನ ಮಂತ್ರಿ ಮೋದಿ ಅವರು ದೇಶದ ಪ್ರಮುಖ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್‌ಗಳ ಸ್ಥಾಪಕರು ಮತ್ತು ನಾಯಕರುಗಳೊಂದಿಗೆ ಇಂದು ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು.

 ಈ ಸಭೆಯಲ್ಲಿ ಭಾರತದಲ್ಲಿ AI ತಂತ್ರಜ್ಞಾನಗಳ ಅಭಿವೃದ್ಧಿ, ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. AI ಸಂಶೋಧನೆ, ನವೀನತೆ, ಉದ್ಯೋಗ ಸೃಷ್ಟಿ ಮತ್ತು Tech ಆಧಾರಿತ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು. 

ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಉತ್ಪಾದನಾ ಕ್ಷೇತ್ರ ಮತ್ತು ಆಡಳಿತದಲ್ಲಿ AI ಬಳಕೆಯನ್ನು ವಿಸ್ತರಿಸುವ ಅಗತ್ಯವನ್ನು ಪ್ರಧಾನಿ ಮೋದಿ ವಿವರಿಸಿದರು.

 ಪ್ರಧಾನಮಂತ್ರಿ ಮಾತನಾಡುತ್ತಾ, “ಭಾರತವು ಜಾಗತಿಕ ಮಟ್ಟದಲ್ಲಿ ಜವಾಬ್ದಾರಿಯುತ ಮತ್ತು ಮಾನವಕೇಂದ್ರಿತ AI technology Develop ಮಾಡುವಲ್ಲಿ ನೇತೃತ್ವ ವಹಿಸಬೇಕು” ಎಂದು ಹೇಳಿದರು. ಜೊತೆಗೆ, ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರದಿಂದ ಅಗತ್ಯ ನೀತಿ ಬೆಂಬಲ, ಮೂಲಸೌಕರ್ಯ ಮತ್ತು ಸಹಕಾರ ಸಿಗಲಿದೆ ಎಂದು ಭರವಸೆ ನೀಡಿದರು. 


 AI ಸ್ಟಾರ್ಟ್‌ಅಪ್ ಪ್ರತಿನಿಧಿಗಳು, ಡೇಟಾ ಲಭ್ಯತೆ, ಕೌಶಲ್ಯಾಭಿವೃದ್ಧಿ, Easy Regulation ಮತ್ತು ಹೂಡಿಕೆ ಉತ್ತೇಜನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪ್ರಧಾನಮಂತ್ರಿ ಮುಂದಿಟ್ಟರು. 


 ಸಭೆಯ ಅಂತ್ಯದಲ್ಲಿ, ಸರ್ಕಾರ ಮತ್ತು ಸ್ಟಾರ್ಟ್‌ಅಪ್‌ಗಳ ನಡುವಿನ ನಿರಂತರ ಸಂಪರ್ಕ, ಸಾರ್ವಜನಿಕ ಸೇವೆಗಳಲ್ಲಿ AI ಆಧಾರಿತ Experimental ಯೋಜನೆಗಳು ಮತ್ತು ಭಾರತಕ್ಕೆ ಪೂರಕವಾದ ರಾಷ್ಟ್ರೀಯ AI ಮಾರ್ಗಸೂಚಿ ರೂಪಿಸುವುದರ ಕುರಿತಂತೆ ನಿರ್ಣಯಗಳಾಗಿವೆ ಎಂದು ವರದಿಯಾಗಿದೆ .

AI | Nanrendra Modi | Technology 
Roundtable Conference | StartUp

Post a Comment

0 Comments