ಸೋಮನಾಥ ದೇವಸ್ಥಾನದ ಮೇಲೆನ ದಾಳಿಗೆ 1000ವರ್ಷ! 'ಸೋಮನಾಥ ಪರ್ವ' ಭವ್ಯ ಕಾರ್ಯಕ್ರಮ


ಸೋಮನಾಥ ಸ್ವಾಭಿಮಾನ ಪರ್ವವು ರಾಷ್ಟ್ರಗೌರವದ ಆತ್ಮವನ್ನು ಪ್ರತಿಬಿಂಬಿಸುತ್ತದೆ.
ಕ್ರಿ.ಶ. 1026ರಲ್ಲಿ ಸಾವಿರ ವರ್ಷಗಳ ಹಿಂದೆ ಆರಂಭವಾದ ಸೋಮನಾಥದ ಮೇಲಿನ ದಾಳಿಗಳ ಸರಣಿ, ಭಾರತದ ಆತ್ಮಬಲ, ನಂಬಿಕೆ ಹಾಗೂ ನಾಗರಿಕತೆಯ ಸಂಕಲ್ಪವನ್ನು ಯಾವತ್ತೂ ಮುರಿಯಲಿಲ್ಲ.
ಸೋಮನಾಥದ ಮೇಲೆ ದಾಳಿ ನಡೆಸಿದವರು ಇತಿಹಾಸದ ಪಾದಟಿಪ್ಪಣಿಗಳಾಗಿದ್ದಾರೆ; ಆದರೆ ಸೋಮನಾಥ ಮಾತ್ರ ಇಂದು ಸಹ ಗರ್ವದಿಂದ ಎತ್ತರವಾಗಿ ನಿಂತಿದೆ!
ಜೈ ಸೋಮನಾಥ.

ಹೀಗೆಂದು ಭಾರತದ ಪ್ರಧಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 


ಭಾರತದ ಅತ್ಯಂತ ಪ್ರಸಿದ್ಧವಾದ ದೇವಾಲಯ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪ್ರಮುಖವಾದ ಸೋಮನಾಥ ದೇವಸ್ಥಾನದ ಮೇಲೆ ಮೊದಲ ಬಾರಿಗೆ ವಿದೇಶಿ ಆಕ್ರಮಣಕಾರನ ದಾಳಿ ನಡೆದು1000 ವರುಷಗಳು ಸಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 'ಸ್ವಾಭಿಮಾನ ಸೋಮನಾಥ ಪರ್ವ' ಇನ್ನು ಹೆಸರಿನಲ್ಲಿ ಅತ್ಯಂತ ವಿಶೇಷವಾದಂತಹ ಕಾರ್ಯಕ್ರಮವನ್ನು ಸೋಮನಾಥ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ.

 ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಲೇಖನವನ್ನು ಪ್ರಕಟಿಸಿದ್ದಾರೆ , ಅದರ ಲಿಂಕ್ ಇಲ್ಲಿದೆ.


 ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಯಲ್ಲಿ ತಾವು ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು #SomnathSwabhimanParv ಎಂಬ hashtag ಅಡಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಈ ಪರ್ವದಲ್ಲಿ ಭಾಗಿಯಾಗಬೇಕೆಂದು ಕೋರಿಕೊಂಡಿದ್ದಾರೆ.

Somanth Mandir | Narendra Modi




Post a Comment

0 Comments