ಕುಂಭನಗರಿ ಪ್ರಯಾಗರಾಜದಲ್ಲಿ ಈಗಾಗಲೇ ಲಕ್ಷಾಂತರ ಭಕ್ತರು ಬಂದು ಸೇರಿದ್ದಾರೆ. ಹಾಗೂ ಈ ಬಾರಿಯ ಮಾಘ ಮೇಳ- 2026 ಕ್ಕೆ ಇಂದು ಚಾಲನೆ ಸಿಗಲಿದೆ.
ಭಾರತೀಯ ಕಾಲಮಾನದ ಪ್ರಕಾರ ಅತ್ಯಂತ ಪವಿತ್ರ ತಿಂಗಳು ಎಂದು ಗುರುತಿಸಲ್ಪಡುವ ಮಾಘಮಾಸದ ಅಂಗವಾಗಿ ಪ್ರತಿಬಾರಿಯಂತೆ, ಈ ಸಲವೂ ಭವ್ಯವಾದ ಮಾಘ ಮೇಳಕ್ಕೆ ಇಂದು ಬೆಳಿಗ್ಗೆ ಚಾಲನೆ ಸಿಕ್ಕಿದೆ. ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಈ ಮೇಳಕ್ಕೆ ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಈಗಾಗಲೇ ಬಂದು ಪ್ರಯಾಗರಾಜ ತಲುಪಿದ್ದಾರೆ.
ಪವಿತ್ರವಾದ ಮಾಘ ಮಾಸದಲ್ಲಿ ಮಾಡುವ ಜಪ, ತಪಸ್ಸು ದಾನ ಸಂಗಮ ಸ್ನಾನ ಯುಗಗಳಿಗೆ ವಿಶೇಷ ಮಹತ್ವ ಇದೆ ಹಾಗೂ ಈ ಸಮಯದಲ್ಲಿ ಮಾಡುವ ಸಂಗಮ ಸ್ನಾನ ಜನ್ಮಜನ್ಮಾಂತರದ ಪಾಪವನ್ನು ಇದು ಕಳೆಯುತ್ತದೆ ಎನ್ನುವ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಪ್ರತಿಬಾರಿಯೂ ಮಾಘ ಮೇಳಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ಪೂರ್ತಿ ಮಾಘ ಮೇಳದ ಸಮಯವನ್ನು ಕಲ್ಪವಾಸದಲ್ಲಿ ಕಳೆಯಲಿರುವ ತಪಸ್ವಿ ಭಕ್ತರು ಈಗಾಗಲೇ ತಮ್ಮ ಸಿದ್ಧತೆಯನ್ನು ಪೂರ್ಣಗೊಳಿಸಿದ್ದಾರೆ. ಹಾಗೂ ಸಂಗಮ ಸ್ನಾನದ ಪ್ರಮುಖ ದಿನಗಳಿಗಾಗಿ ಸಂಪೂರ್ಣ ತಯಾರಿ ನಡೆಸಲಾಗಿದೆ.
ಭಕ್ತರಿಗಾಗಿ ಕಟ್ಟುನಿಟ್ಟಿನ ಸುರಕ್ಷತೆ ಹಾಗೂ ಸುವ್ಯವಸ್ಥೆ
ಮೇಳದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರಯಾಗರಾಜದಲ್ಲಿ ಸಂಚಾರ ನಿಯಂತ್ರಣ ಸ್ವಚ್ಛತೆ ಭದ್ರತೆ ಆರೋಗ್ಯ ಮುಂತಾದ ವಿಷಯಗಳಲ್ಲಿ ವಿಶೇಷವಾಗಿ ಗಮನಹರಿಸಿ ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ತಾತ್ಕಾಲಿಕವಾದ ವೈದ್ಯಕೀಯ ಶಿಬಿರಗಳು, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ವಸತಿ ಕೂಡ ಕಲ್ಪಿಸಲಾಗಿದೆ. ಪೋಲೀಸ್, NDRF ಮತ್ತು ಸಾವಿರಾರು ಸ್ವಯಂಸೇವಕರು ಭತ್ತದ ಸುರಕ್ಷತೆ ಮತ್ತು ಸುವ್ಯವಸ್ಥೆಗಾಗಿ ಸಂಪೂರ್ಣ ಸಜ್ಜಾಗಿದ್ದಾರೆ.
ಈ ಬಾರಿಯ ಪವಿತ್ರ ಐದು ಸಂಗಮ ಸ್ನಾನಗಳಲ್ಲಿ ಜನವರಿ ಮೂರರಂದು ಮೊದಲ ಪವಿತ್ರ ಸ್ನಾನ. ಈ ಕಾರಣದಿಂದ ಬೆಳಗ್ಗಿನಿಂದಲೇ ಸಂಗಮ ತೀರದಲ್ಲಿ ಭಕ್ತರ ದಟ್ಟಣೆ ಕಾಣಿಸಿಕೊಂಡಿದೆ. ಮಾಘ ಮೇಳ ಬರುವ ತಿಂಗಳಿನ ತನಕವೂ ನಡೆಯಲಿದ್ದು ಇನ್ನೂ ಹೆಚ್ಚಿನ ಭಕ್ತರು ಪ್ರಯಾಗರಾಜಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಕಳೆದ ಬಾರಿ ಆಯೋಜಿಸಲ್ಪಟ್ಟ ಐತಿಹಾಸಿಕ ಮಹಾಕುಂಭಮೇಳದ ಯಶಸ್ವಿ ಆಯೋಜನೆಯ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ನಿರೀಕ್ಷೆ ದುಪ್ಪಟ್ಟಾಗಿದೆ. ಹಾಗೆಯೇ ಯೋಗಿ ಸರಕಾರ ಕೂಡ ಯಾವುದೇ ಲೋಪ ಬಾರದಂತೆ ಕಾರ್ಯಕ್ರಮ ಯಶಸ್ಸುಗೊಳಿಸಲು ಕಟ್ಟಿಬದ್ಧವಾಗಿದೆ. ಬಹಳ ದೊಡ್ಡ ಆರ್ಥಿಕ ಲಾಭ, Tourism, Investment, Employment ಈ ಎಲ್ಲಾ ದೃಷ್ಟಿಯಿಂದ ಯುಪಿ ಸರಕಾರಕ್ಕೆ ಈ ಮೇಳ ಅತ್ಯಂತ ಮಹತ್ವದ್ದು.
0 Comments