ಮುಂಬೈ :
ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ BJP+ ಮೈತ್ರಿಕೂಟವು ಇತಿಹಾಸಾತ್ಮಕ ಗೆಲುವು ಸಾಧಿಸಿದೆ. ಮೊದಲ ಬಾರಿಗೆ ಮುಂಬೈನಲ್ಲಿ ಬಿಜೆಪಿ ಬಹುಮತ ಪಡೆಯುವ ಮೂಲಕ ಗದ್ದುಗೆ ಏರಲಿದೆ.
ಒಟ್ಟು 227 ಸ್ಥಾನಗಳಲ್ಲಿ 208 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ.
BMC : 208/227
BJP+ : 119
THACKERAY+ : 69
CONG : 10
OTH : 10
ಈ ಫಲಿತಾಂಶದೊಂದಿಗೆ ಮುಂಬೈ ಮತದಾರ ಠಾಕ್ರೆ ಮೈತ್ರಿಕೂಟವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾನೆ. ಈ ಮೂಲಕ ಮುಂಬೈ ರಾಜಕೀಯ ಮಗ್ಗುಲು ಬದಲಿಸಿದೆ.
ಚುನಾವಣಾ ಫಲಿತಾಂಶದ ನಂತರ ದೇವೇಂದ್ರ ಫಡ್ನವಿಸ್ ಅವರು ದೇಶದ ಅತ್ಯಂತ ಪ್ರಭಾವಿ ಮರಾಠಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಈ ಗೆಲುವಿನೊಂದಿಗೆ ಮುಂಬೈಗೆ ಮೊದಲ ಬಾರಿಗೆ ಬಿಜೆಪಿ ಮೇಯರ್ ಆಯ್ಕೆಯಾಗುವ ಸಾಧ್ಯತೆ ಬಲವಾಗಿದೆ.
0 Comments