ಇರಾನ್: ಖಮೇನಿ ವಿರುದ್ಧ ಪ್ರತಿಭಟನೆ : 700 ಸಾವು, 10,000 ಜನರ ಬಂಧನ!

ಇರಾನ್ : ಇರಾನ್ ನ ಅಧ್ಯಕ್ಷ  ಖಮೇನಿ ವಿರುದ್ಧ ಇರಾನ್ ನಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಯಲ್ಲಿ ಕಳೆದ 72 ಗಂಟೆಯಲ್ಲಿ ಸುಮಾರು 700 ಪ್ರತಿಭಟನಾಕಾರರು ಮೃ*ತಪಟ್ಟಿದ್ದಾರೆ ಮತ್ತು 10,000ಕ್ಕೂ ಹೆಚ್ಚು ಜನರನ್ನು ಖಮೇನಿ ಸರಕಾರ ಬಂಧಿಸಿದೆ ಎಂದು ವರದಿಯಾಗಿದೆ 

 ಬೆಲೆ ಏರಿಕೆಯ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ಇರಾನ್ ನಲ್ಲಿ ಖಮೇನಿಯ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿದೆ.


 ಈ ಮಧ್ಯೆ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಅಮೆರಿಕ ಇರಾನ್ ಮೇಲೆ ತಾನು ದಾ*ಳಿ ಮಾಡುತ್ತೇನೆ ಎಂದು ಹೇಳಿರುವುದರಿಂದ ಸ್ವಲ್ಪಮಟ್ಟಿಗೆ ಇರಾನ್ ಸರಕಾರ ಬೆದರಿದೆ ಹಾಗೂ ಇಲ್ಲಿಯತನಕ ಯಾವುದೇ ಪ್ರತಿಭಟನಾಕಾರರನ್ನು ಉಗ್ರವಾಗಿ ಶಿಕ್ಷಿಸಿಲ್ಲ.


 ಆದರೆ ಕೆಲ ಹಿರಿಯ ವಿಮರ್ಶಕರ ಪ್ರಕಾರ ಮುಂದಿನ ಕೆಲವೇ ದಿನಗಳಲ್ಲಿ ಇರಾನ್ ಒಳಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಸೇನಾ ಕಾರ್ಯಚರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

America | Iran | protests

Post a Comment

0 Comments