ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.5 ರಷ್ಟು ದಾಖಲಾಗಿದೆ. ಅಮೆರಿಕನ್ ಜಿಯೋಲಾಜಿಕಲ್ ಸರ್ವೆ ಸರ್ವೆ ಹೇಳುವ ಪ್ರಕಾರ, ಮೆಕ್ಸಿಕೋ ನಗರದಿಂದ ಉತ್ತರಕ್ಕೆ ಸುಮಾರು 250 ಮೈಲಿಗಳಷ್ಟು ದೂರದಲ್ಲಿ ಈ ಭೂಕಂಪನ ಸಂಭವಿಸಿದೆ. ಭೂಮಿಯ ಮೇಲ್ಪದರದಿಂದ ಸುಮಾರು 35km ಗಳಷ್ಟು ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು ಮೆಕ್ಸಿಕೋ ದುದ್ದಕ್ಕೂ ಜನ ಕಂಪನದ ತೀವ್ರತೆಯನ್ನು ಅನುಭವಿಸಿದರು.
ಭೂಕಂಪನ ಸಂಭವಿಸಿದ ವೇಳೆಯಲ್ಲಿ ಮೆಕ್ಸಿಕೋದ ಅಧ್ಯಕ್ಷೆ ನಡೆಸುತ್ತಿದ್ದ ಪತ್ರಿಕಾಗೋಷ್ಠಿಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಸುರಕ್ಷಿತ ತಳ್ಳಕ್ಕೆ ತೆರಳ ಬೇಕಾಯಿತು.
ಮೆಕ್ಸಿಕೋ ಪ್ರಾಂತದ ಪೆಸಿಫಿಕ್ ಕರಾವಳಿ ಪ್ರದೇಶಗಳು ಹಾಗೂ ಗ್ವೆರೆರೋ ಪ್ರದೇಶ ಭೂಕಂಪನದ ದೃಷ್ಟಿಯಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಮುಂದೆಯೂ ಕೆಲ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಆಫ್ಟರ್ ಶಾಕ್ ಆತಂಕ ಮುಂದುವರೆದಿದ್ದು ಈ ಕುರಿತಾಗಿ ಅಧಿಕಾರಿಗಳು ಜನಸಾಮಾನ್ಯರಿಗೆ ಸೂಚನೆಯನ್ನು ಹೊರಡಿಸಿದ್ದಾರೆ.
ಈವರೆಗಿನ ವರದಿಯ ಪ್ರಕಾರ ಭೂಕಂಪನದ ತೀವ್ರತೆಯಿಂದ 2 ಸಾ*ವು ಸಂಭವಿಸಿದ್ದು ಸುಮಾರು 50 ಮನೆಗಳು ಧರೆಗುರುಳಿವೆ ಎಂದು ಹೇಳಲಾಗಿದೆ. ಹಾಗೂ ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.
0 Comments