ಢಾಕಾ: ಇತ್ತೀಚಿನ ದಿನಗಳಲ್ಲಿ ಅಲ್ಪ ಸಂಖ್ಯಾತರ ಮೇಲೆ ಮೇಲೆ ನಡೆಯುವ ದಾ*ಳಿ ಯ ಮುಂದುವರಿದಿದೆ. ಕಳೆದ ಮೂರು ವಾರಗಳಲ್ಲಿ 5ನೇ ಹಿಂದೂ ವ್ಯಕ್ತಿಯನ್ನು ಗುಂಡಿಟ್ಟು ಕೊ*ಲ್ಲಲಾಗಿದೆ.
ಕೊ*ಲೆಯಾದ ವ್ಯಕ್ತಿ, 45 ವರ್ಷದ ಹಿಂದೂ ಉದ್ಯಮಿ ಮತ್ತು ಸ್ಥಳೀಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಾಣಾ ಪ್ರತಾಪ್ ಬೈರಾಗಿ ಎಂದು ಗುರುತಿಸಲಾಗಿದೆ.
ರಾಣಾ ಪ್ರತಾಪ್ ನನ್ನು ಜನವರಿ 5ರಂದು ಸಂಜೆ ಸುಮಾರು 5:45 ಕ್ಕೆ ಜನನಿಬಿಡ ಪ್ರದೇಶವಾದ ಜಶೋರ್ ಜಿಲ್ಲೆಯ ಮಣಿರಾಮ್‌ಪುರದ ಕೊಪಾಲೀಯ ಬಜಾರ್ ನಲ್ಲಿ ಓಟೋ ಸೈಕಲ್ ಮೂಲಕ ಬಂದ ಮೂವರು ದುಷ್ಕರ್ಮಿಗಳ ಗುಂಪೊಂದು ಮನ ಬಂದಂತೆ ಗುಂಡು ಹಾರಿಸಿದೆ. ಅನೇಕ ಸುತ್ತು ಗುಂಡು ಹಾರಿಸಿದಾಗ ರಾಣಾ ಪ್ರತಾಪ್ಎಂ ಸ್ಥಳದಲ್ಲೇ ಮೃ*ತ ಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮತ್ತು ಮಾಧ್ಯಮಗಳು ವರದಿ ಮಾಡಿವೆ.
📍ಹತ್ಯೆಯಾದ ವ್ಯಕ್ತಿಯ ಹಿನ್ನೆಲೆ
-
ಬೈರಾಗಿ ಅವರು Arua ಹಳ್ಳಿಯ ನಿವಾಸಿಯಾಗಿದ್ದು, ತಮ್ಮದೇ ಆದ 'ಐಸ್ ಫ್ಯಾಕ್ಟರಿ' ನಡೆಸುತ್ತಿದ್ದರು.
-
ಕೆಲವು ವರದಿಗಳ ಪ್ರಕಾರ, ಅವರು “Dainik BD Khabar” ಎಂಬ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕನಾಗಿ ಕೂಡ ಕೆಲಸ ಮಾಡುತ್ತಿದ್ದರು.
ಇದರೊಂದಿಗೆ, ಕಳೆದ ಮೂರು ವಾರಗಳಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಐದನೇ ಹ*ತ್ಯಾ ಘಟನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾ*ಚಾರ ಮತ್ತು ಅಲ್ಪಸಂಖ್ಯಾತರ ಸುರಕ್ಷತೆ ವಿಷಯವು ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.
Bangladesh Riots Updates | Minority | Democracy | India | Politics
0 Comments