ಇನ್ನು 10 ನಿಮಿಷಗಳಲ್ಲಿ ಡೆಲಿವರಿಇಲ್ಲ : ಕಂಪೆನಿಗಳಿಗೆ ಸಮಯ ಮಿತಿಯನ್ನು ಕೈಬಿಡಲುಕೇಂದ್ರ ಸರ್ಕಾರ ಸೂಚನೆ

10 ನಿಮಿಷಗಳಲ್ಲಿ ವಿತರಣೆಯ ಭರವಸೆ ನೀಡುವ ವ್ಯವಸ್ಥೆಯನ್ನು ಕೈಬಿಡುವಂತೆ  ಬ್ಲಿಂಕಿಟ್, ಜೆಪ್ಟೋ, ಸ್ವಿಗಿ ಹಾಗೂ ಜೊಮಾಟೋ ಕಂಪನಿಗಳಿಗೆ  ಕೇಂದ್ರ ಸರ್ಕಾರ ಸೂಚನೆ ನೀಡಿದೆ. 
ಡೆಲಿವರಿ ಸಿಬ್ಬಂದಿಯ ಸುರಕ್ಷತೆ ಮತ್ತು ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ ಅವರು ಬ್ಲಿಂಕಿಟ್, ಜೆಪ್ಟೋ, ಸ್ವಿಗಿ ಮತ್ತು ಜೊಮಾಟೋ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.


 ಈ ವೇಳೆ ಕಟ್ಟುನಿಟ್ಟಾದ ವಿತರಣಾ ಸಮಯ ಭರವಸೆಗಳನ್ನು ರದ್ದುಗೊಳಿಸುವಂತೆ  ಕಂಪನಿಗಳಿಗೆ ಮನವಿ ಮಾಡಿದರು. 
ವೇಗದ ವಿತರಣೆಯ ಒತ್ತಡದಿಂದ ಡೆಲಿವರಿ ಸಿಬ್ಬಂದಿಗೆ ಉಂಟಾಗುವ ಅಪಾಯಗಳನ್ನು ತಪ್ಪಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

Post a Comment

0 Comments