ಉಡುಪಿ: ಉಡುಪಿಯಲ್ಲಿ ಪ್ರತೀ ಎರಡು ವರ್ಷಕೊಮ್ಮೆ ನಡೆಯುವ ಪರ್ಯಾಯ ಉತ್ಸವಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರ ಸರ್ವಜ್ಞ ಪೀಠಾರೋಹಣದೊಂದಿಗೆ ಪರ್ಯಾಯದ ಜವಾಬ್ದಾರಿಯನ್ನು ಪುತ್ತಿಗೆ ಮಠದಿಂದ ಶಿರೂರು ಮಠಕ್ಕೆ ಹಸ್ತಾಂತರ ಮಾಡಲಾಯಿತು.
20 ವರ್ಷದ ಸ್ವಾಮೀಜಿಯವರು ಕಾಪುವಿನ ದಂಡತೀರ್ಥ ಸರೋವರದಲ್ಲಿ ಪವಿತ್ರ ಸ್ನಾನ ನೆರವೇರಿಸಿ, ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಸಾವಿರಾರು ಭಕ್ತರೊಂದಿಗೆ ಉಡುಪಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಬಣ್ಣಬಣ್ಣದ ಟ್ಯಾಬ್ಲೋಗಳು, ಜನಪದ ಕಲಾ ಪ್ರದರ್ಶನಗಳು ಮತ್ತು ಶಾಸ್ತ್ರೀಯ ಸಂಗೀತ ಆಕರ್ಷಣೆಯ ಕೇಂದ್ರವಾಗಿದ್ದವು.
ವೈಭವದಲ್ಲಿ ಸಾಗಿ ಬಂದ ಮೆರವಣಿಗೆ ಶ್ರೀ ಕೃಷ್ಣ ಮಠದಲ್ಲಿ ಕೊನೆಗೊಂಡು, ಅಲ್ಲಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪರ್ಯಾಯದ ಅಧಿಕಾರವನ್ನು ಶಿರೂರು ಮಠಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದರು.
ಜನವರಿ 22ರವರೆಗೆ ಪರ್ಯಾಯೋತ್ಸವದ ಕಾರ್ಯಕ್ರಮಗಳು ಮುಂದುವರೆಯಲಿದ್ದು, ಸಾರ್ವಜನಿಕ ಅಭಿನಂದನಾ ಸಮಾರಂಭ ಹಾಗೂ ಬ್ರಹ್ಮ ರಥೋತ್ಸವ ಪ್ರಮುಖ ಆಕರ್ಷಣೆಯಾಗಿವೆ.
0 Comments