ಇರಾನ್ ಮತ್ತು ಅಮೆರಿಕಾ ರಾಜತಾಂತ್ರಿಕ ಮಾರ್ಗಗಳ ಮೂಲಕ ಉದ್ವಿಗ್ನತೆಯನ್ನು ತಗ್ಗಿಸಲು ಹಲವು ರಾಷ್ಟ್ರಗಳು ಪ್ರಯತ್ನ!

ತೆಹರಾನ್ : ಇರಾನ್ ಹಾಗೂ ಅಮೆರಿಕಾ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆ, ದೇಶದೊಳಗಿನ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಇರಾನ್‌ನ ವಾಯುಪ್ರದೇಶವನ್ನು ಮತ್ತೆ ತೆರೆಯಲಾಗಿದೆ. 

ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿಯನ್ನು ತಗ್ಗಿಸುವ ಪ್ರಯತ್ನದ ಭಾಗವಾಗಿ ಪರಿಗಣಿಸಲಾಗುತ್ತಿದೆ. ಆದರೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ರಾಜತಾಂತ್ರಿಕ ವಲಯಗಳು ಎಚ್ಚರಿಕೆ ನೀಡಿವೆ. ಇರಾನ್‌ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು ಮತ್ತು ಅದಕ್ಕೆ ಸರ್ಕಾರದ ಖಡಕ್ ಪ್ರತಿಕ್ರಿಯೆ, ಅಮೆರಿಕದ ಕಠಿಣ ಹೇಳಿಕೆಗಳು ಹಾಗೂ ಸೈನಿಕ ಹಸ್ತಕ್ಷೇಪದ ಸಾಧ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿವೆ. 



ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದ ಹಲವು ಮಿತ್ರ ರಾಷ್ಟ್ರಗಳು ಅಮೆರಿಕವನ್ನು ಸಂಪರ್ಕಿಸಿ, ಇರಾನ್ ವಿರುದ್ಧ ತ್ವರಿತ ಸೈನಿಕ ದಾಳಿ ನಡೆಸದಂತೆ ಮನವಿ ಮಾಡಿಕೊಂಡಿರುವುದಾಗಿ ರಾಜತಾಂತ್ರಿಕ ಮೂಲಗಳು ತಿಳಿಸಿವೆ. 

 ಪ್ರಸಕ್ತ ವಲಯದ  ಸ್ಥಿರತೆ ಈಗಾಗಲೇ ಗಾಜಾದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧದಿಂದ ಗಂಭೀರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಮತ್ತೊಂದು ದೊಡ್ಡ ಸಂಘರ್ಷವು ಸಂಪೂರ್ಣ ಮಧ್ಯಪ್ರಾಚ್ಯವನ್ನೇ ಅಸ್ಥಿರಗೊಳಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.

 ಇದೇ ಕಾರಣಕ್ಕಾಗಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ಉದ್ವಿಗ್ನತೆಯನ್ನು ತಗ್ಗಿಸಲು ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇರಾನ್ ವಾಯುಪ್ರದೇಶವನ್ನು ಪುನಃ ತೆರೆಯಿರುವುದು ನಾಗರಿಕ ವಿಮಾನ ಸಂಚಾರ ಪುನಃ ಆರಂಭಕ್ಕೆ ಸಹಾಯಕವಾಗಬಹುದು. ಆದರೆ ತಜ್ಞರ ಅಭಿಪ್ರಾಯದಂತೆ, ಇದು ಕೇವಲ ತಾತ್ಕಾಲಿಕ ಕ್ರಮವಾಗಿದ್ದು, ರಾಜಕೀಯ ಮತ್ತು ಸೈನಿಕ ಉದ್ವಿಗ್ನತೆ ಮುಂದುವರಿದರೆ ಪರಿಸ್ಥಿತಿ ಮತ್ತೆ ಗಂಭೀರವಾಗುವ ಸಾಧ್ಯತೆ ಇದೆ.

Iran | America | Middle East

Post a Comment

0 Comments